Index   ವಚನ - 1187    Search  
 
ʼಗುರುದೇವೋ ಮಹಾದೇವೋ' ಎಂದುದಾಗಿ, ಗುರುದೇವನೇ ಮಹಾದೇವನು. ʼಯೋ ಗುರುಃ ಸ ಶಿವಃ ಪ್ರೋಕ್ತೋ ಯೋಃ ಶಿವಃ ಸ ಗುರುಃ ಸ್ಮೃತಃ' ಎಂದುದಾಗಿ-ಗುರುವೆ ಶಿವನು, ಶಿವನೆ ಶ್ರೀಗುರು ನೋಡಾ. `ಗುರುದೈವಾತ್ ಪರಂ ನಾಸ್ತಿ' ಎಂದುದಾಗಿ-ಗುರುವಿನಿಂದಧಿಕವಿಲ್ಲ. `ಶಿಷ್ಯದೀಕ್ಷಾದಿಕಾರಣಾತ್' ಎಂದುದಾಗಿ, ಎನ್ನ ನಿಮಿತ್ತ ಗುರುಮೂರ್ತಿಯಾದೆ, ಕೂಡಲಚೆನ್ನಸಂಗಮದೇವಾ.