Index   ವಚನ - 1193    Search  
 
ಗುರು ಮುಟ್ಟಿ ಲಿಂಗವಾಯಿತ್ತೈಸೆ, ಅದು ಬಿದ್ದಿತ್ತು, ಹೋಯಿತ್ತೆಂಬ ಅಜ್ಞಾನವ ನೋಡಾ, ಕಟ್ಟುವ ಠಾವನು, ಮುಟ್ಟುವ ಭೇದವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.