Index   ವಚನ - 1194    Search  
 
ಗುರುಲಿಂಗಜಂಗಮದ ಏಕಾರ್ಥವನೇನೆಂದುಪಮಿಸಬಹುದು? ಗುರು ಪ್ರಾಣ, ಲಿಂಗ ದೇಹ, ಜಂಗಮ ಆಪ್ಯಾಯನ ಎಂದುದಾಗಿ. ಪ್ರಾಣ ಮುಟ್ಟಿ ಬಂದಡೇನು? ಕಾಯ ಮುಟ್ಟಿ ಬಂದಡೇನು? ಜಿಹ್ವೆ ಮುಟ್ಟಿ ಬಂದಡೇನು? ಜಂಗಮಮುಖ ಆಪ್ಯಾಯನ! ಕೂಡಲಚೆನ್ನಸಂಗಮದೇವಾ, ಜಂಗಮಪ್ರಸಾದ ಸರ್ವಸಿದ್ಧಿ.