Index   ವಚನ - 1195    Search  
 
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ [ಮಂತ್ರ] ಒಂದೇಯೆಂಬ ಸುರೆಯ ಭುಂಜಕರ ಮಾತ ಕೇಳಲಾಗದು. ಅದೇನು ಕಾರಣವೆಂದರೆ; ಪಾದವಿಡಿದು ಅವಧರಿಸಿಕೊಂಡುದೆ ಲಿಂಗ, ಪಾದವಿಡಿಯದಿದ್ದರೆ ಕಲ್ಲು, ಪಾದವಿಡಿದಾತನೆ ಜಂಗಮ, ಪಾದವಿಡಿಯದಾತನೆ ಮಾನುಷ. ಭಯ ಭೀತಿ ಭೃತ್ಯಾಚಾರದಿಂದ ಧೀರ್ಘದಂಡ ನಮಸ್ಕಾರವಮಾಡಿ ಕೊಂಡರೆ ಪಾದೋದಕ ಪ್ರಸಾದ, ಕೊಳ್ಳದುದೆ ಉದಕ ಓಗರ. ಚಿತ್ತ ಶುದ್ಧವಾಗಿ ಧರಿಸಿಕೊಂಡುದೆ ವಿಭೂತಿ ರುದ್ರಾಕ್ಷಿ, ಶುದ್ಧವಿಲ್ಲದುದೆ ಬೂದಿ, ಮರನ ಮಣಿ, ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ.