Index   ವಚನ - 1198    Search  
 
ಗುರುಲಿಂಗದಲ್ಲಿ ಪೂಜೆಯ ಮಾಡಿ, ಜಂಗಮಲಿಂಗದಲ್ಲಿ ಉದಾಸೀನವ ಮಾಡಿದಡೆ ಗುರುಲಿಂಗದ ಪೂಜಕರಿಗೆ ಶಿವದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಲೋಕದ ಕರ್ಮಿಗಳಿಗೆ ಯಮದೂತರ ದಂಡನೆ ಎಂಬುದ ಮಾಡಿದೆಯಯ್ಯಾ. ಭಕ್ತಿಯನರಿಯರು, ಯುಕ್ತಿಯನರಿಯರು ಕೂಡಲಚೆನ್ನಸಂಗಮದೇವಾ.