Index   ವಚನ - 1201    Search  
 
ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗವೆಂಬ ಅಪಸ್ಮಾರಿಗಳ ಮಾತ ಕೇಳಾಗದು. ಅದೆಂತೆಂದಡೆ; ಅಂಗದ ಮೇಲೆ ಒಬ್ಬ ಗಂಡ, ಮನೆಯೊಳಗೆ ಒಬ್ಬ ಗಂಡ, ಹಿತ್ತಲೊಳಗೊಬ್ಬ ಗಂಡ, ಮುಂಚೆಯಲೊಬ್ಬ ಗಂಡ- ಇಂತೀ ಚತುವಿರ್ಧ ಗಂಡರು ಎಂಬ ಸತಿಯರ ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ? ಕೂಡಲಚೆನ್ನಸಂಗಮದೇವಾ ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು.