Index   ವಚನ - 1202    Search  
 
ಗುರುವನುಳಿದು ಲಿಂಗವುಂಟೆ? ಲಿಂಗವನುಳಿದು ಜಂಗಮವುಂಟೆ? ಜಂಗಮವನುಳಿದು ಪ್ರಸಾದವುಂಟೆ? ಪ್ರಸಾದವನುಳಿದು ಸದ್ಭಕ್ತಿಯುಂಟೆ? ಭಕ್ತಿಯನುಳಿದು ಮುಕ್ತಿಯುಂಟೆ? ಇಲ್ಲವಯ್ಯಾ ಕೂಡಲಚೆನ್ನಸಂಗಯ್ಯ.