Index   ವಚನ - 1226    Search  
 
ಗುರುಸ್ಥಲ ಘನವೆಂಬೆನೆ? ಗುರುವಿಂಗೆ ಲಿಂಗವುಂಟು. ಲಿಂಗಸ್ಥಲ ಘನವೆಂಬೆನೆ? ಲಿಂಗಕ್ಕೆ ಜಂಗಮವುಂಟು. ಆ ಜಂಗಮ ಎಲ್ಲಿ ಇದ್ದಡೆ ಅಲ್ಲಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಭಕ್ತಿ ಅನುಭಾವ ಸನ್ನಿಹಿತ ಕಾಣಾ-ಕೂಡಲಚೆನ್ನಸಂಗಮದೇವಾ.