ಜಂಗಮಭಕ್ತನು ಗಂಡನುಳ್ಳ ಸಜ್ಜನಸತಿಯಂತಿರಬೇಕು.
ಹೊಯ್ದಡೆ ಬಯ್ದಡೆ ಜರಿದಡೆ ಕೋಪಿಸಿದಡೆ ನಿಂದಿಸಿದಡೆ
ಅಳಲಿಸಿದಡೆ ಬಳಲಿಸಿದಡೆ ಹುರುಡಿಸಿದಡೆ-
ಇಂತಿವು ಮೊದಲಾಗಿ ಏನೊಂದು ಮಾಡಿದಡೆಯೂ
ಮನದಲ್ಲಿ ಮರುಗಿದಡೆ, ಇದಿರುತ್ತರ ಕೊಟ್ಟಡೆ
ಆ ಸಜ್ಜನಸತಿಯ ಗುಣಕ್ಕೆ ಕೊರತೆಯಹುದು.
ಆ ಪುರುಷನೆ ದೈವವೆಂದರಿವುದು,
ಅವನ ಗುಣವ ನೋಡದೆ, ತನ್ನ ಗುಣವ ಬಿಡದೆ ಇದ್ದಡೆ
ಪತಿವ್ರತೆ ಎನಿಸುವಳು, ಮೇಲೆ ಮುಕ್ತಿಯಪ್ಪುದು.
ಈ ಪತಿವ್ರತೆಯಂತೆ ಜಂಗಮದಾಸೋಹವ ಮಾಡುವ ಭಕ್ತರು
ಜಂಗಮ ಮಾಡಿದಂತೆ ಮಾಡಿಸಿಕೊಂಬುದು,
ನಿರುತ್ತರದಲ್ಲಿಪ್ಪುದು.
ಹೀಂಗಿರದೆ, ಜಂಗಮಕ್ಕೆ ಇದಿರುತ್ತರವ ಕೊಟ್ಟಡೆ,
ಅವರಿಗೆ ಮಾಡುವ ಭಕ್ತಿಯ ಸಾಮಾನ್ಯವ ಮಾಡಿದಡೆ
ತಾ ಹಿಂದೆ ಮಾಡಿದ ಭಕ್ತಿಯೆಲ್ಲ ಬೆಂದುಹೋಗಿ
ಮುಂದೆ ನರಕಕ್ಕೆ ಗುರಿಯಹುದು ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Jaṅgamabhaktanu gaṇḍanuḷḷa sajjanasatiyantirabēku.
Hoydaḍe baydaḍe jaridaḍe kōpisidaḍe nindisidaḍe
aḷalisidaḍe baḷalisidaḍe huruḍisidaḍe-
intivu modalāgi ēnondu māḍidaḍeyū
manadalli marugidaḍe, idiruttara koṭṭaḍe
ā sajjanasatiya guṇakke korateyahudu.
Ā puruṣane daivavendarivudu,
avana guṇava nōḍade, tanna guṇava biḍade iddaḍe
pativrate enisuvaḷu, mēle muktiyappudu.
Ī pativrateyante jaṅgamadāsōhava māḍuva bhaktaru
jaṅgama māḍidante māḍisikombudu,
Niruttaradallippudu.
Hīṅgirade, jaṅgamakke idiruttarava koṭṭaḍe,
avarige māḍuva bhaktiya sāmān'yava māḍidaḍe
tā hinde māḍida bhaktiyella benduhōgi
munde narakakke guriyahudu tappadu kāṇā,
kūḍalacennasaṅgamadēvā.