Index   ವಚನ - 1241    Search  
 
ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ, ಜಂಗಮಪಾದವು ಜಗದ್ಭರಿತವಾಗಿರ್ಪುದಯ್ಯಾ, ಜಂಗಮಪಾದವು ಆದಿಯಿಂದತ್ತತ್ತಲಾಗಿರ್ಪುದಯ್ಯಾ, `ಚರಣಂ ಪವಿತ್ರಂ ವಿತತಂ ಪುರಾಣಮ್' ಎಂದುದಾಗಿ, ಜಂಗಮದ ಶ್ರೀಪಾದವ ಭಕ್ತಿಯಿಂದ ಪಿಡಿದ ಸದ್ಭಕ್ತನು ದುರಿತಾಂಬುಧಿಯಿಂದ ದೂರವಾಗಿರ್ಪನಯ್ಯಾ ಕೂಡಲಚೆನ್ನಸಂಗಮದೇವಾ.