Index   ವಚನ - 1245    Search  
 
ಜಂಗಮ ಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ ಮರೆಯಬೇಕು. ಜಂಗಮ ಲಿಂಗಭಕ್ತನಾದಡೆ ಪೂರ್ವಕುಲವ ಬೆರಸಲಾಗದು. ಜಂಗಮ ಲಿಂಗಪೂಜಕನಾದಡೆ ಮಾನವರನು ಉಪಧಾವಿಸಲಾಗದು. ಜಂಗಮ ಲಿಂಗವೀರನಾದಡೆ ಅರ್ಥವ ಕಟ್ಟಲಾಗದು. ಜಂಗಮ ಲಿಂಗಪ್ರಸಾದಿಯಾದಡೆ ಬೇಡಿದಡೆ ಇಲ್ಲೆನ್ನಲಾಗದು. ಜಂಗಮ ಲಿಂಗಪ್ರಾಣಿಯಾದಡೆ ಲಾಂಛನದ ನಿಂದೆಯ ಕೇಳಲಾಗದು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಜಂಗಮಲಿಂಗಭಕ್ತಿ.