Index   ವಚನ - 1254    Search  
 
ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಸ್ವಪ್ನಪ್ರಸಾದಿಗಳುಂಟಾಗಿ. ಸ್ವಪ್ನಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಸುಷುಪ್ತಿಪ್ರಸಾದಿಗಳುಂಟಾಗಿ. ಸುಷುಪ್ತಿಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ ಲಿಂಗಪ್ರಸಾದಿಗಳುಂಟಾಗಿ. ಈ ಒಂದರಲ್ಲು ನಿಯತರಲ್ಲಾಗಿ ನಾವು ಭಕ್ತರು, ನಾವು ಶರಣರು, ನಾವು ಹಿರಿಯರೆಂಬ ಮಧುಭುಂಜಕರ ಮೆಚ್ಚುವನೆ, ನಮ್ಮ ಕೂಡಲಚೆನ್ನಸಂಗಮದೇವ?