ಜಾತಕರ್ಮ ಶುಭಕರ್ಮ ಪ್ರೇತಕರ್ಮವ
ಮಾಡುವರು ಲೋಕದ ಮನುಜರು.
ಅದೆಂತೆಂದಡೆ:
ಈರಿಲು, ಮೂವಟ್ಟಲು, ಹಸೆ-ಹಂದರ,
ತೊಂಡಿಲು ಬಾಸಿಂಗ;
ಹಣೆಯಕ್ಕಿ-ಹೆಣನ ಸಿಂಗಾರ-ಶ್ರಾದ್ಧಕೂಳು-
ಈ ಪರಿಯ ಮಾಡುವನೆ ಶಿವಭಕ್ತ? [ಅಲ್ಲ]. ಅದೆಂತೆಂದಡೆ;
ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ,
ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ,
ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ
ವಿಭೂತಿವೀಳೆಯಂಗೊಟ್ಟು
ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ.
ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ,
ಲಿಂಗದೂರ ಅಘೋರನರಕಿಯಯ್ಯಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Jātakarma śubhakarma prētakarmava
māḍuvaru lōkada manujaru.
Adentendaḍe:
Īrilu, mūvaṭṭalu, hase-handara,
toṇḍilu bāsiṅga;
haṇeyakki-heṇana siṅgāra-śrād'dhakūḷu-
ī pariya māḍuvane śivabhakta? [Alla]. Adentendaḍe;
huṭṭida makkaḷige liṅgadhāraṇe,
neṭṭane vivāhadalli śivagaṇaṅgaḷa prasāda,
dēvarapādakke sandalli śivabhaktaṅge
vibhūtivīḷeyaṅgoṭṭu
samādhipūrṇanaṁ māḍuvude śivācāra.
Lōkada karmava māḍidaḍe āta bhaktanalla,
liṅgadūra aghōranarakiyayyā,
kūḍalacennasaṅgamadēvā.