ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ:
ಜ್ಞಾನ, ತನುವಿನ ಪರಿಣಾಮ.
ಸುಜ್ಞಾನ, ಪ್ರಾಣದ ಪರಿಣಾಮ.
ಕೈವಲ್ಯಜ್ಞಾನ, ಮನದ ಪರಿಣಾಮ.
ಗಮನದ ಭಾವದರಿವು ತ್ರಿವಿಧ:
ವೈಲ, ವೈರಂಭಣ, ಮುಖಪ್ರಭಂಜನ.
ಅಂತರ್ವಹ ವಾಯು ಭಾವದ ಚರಿತ್ರ.
ಇದರ ಭೇದವ ಕೂಡಲಚೆನ್ನಸಂಗಾ
ನಿಮ್ಮ ಶರಣನಲ್ಲದೆ
ಕುಹಕಯೋಗಿಗಳವರೆತ್ತ ಬಲ್ಲರು?
Art
Manuscript
Music
Courtesy:
Transliteration
Jñāna, sujñāna, kaivalyajñāna:
Jñāna, tanuvina pariṇāma.
Sujñāna, prāṇada pariṇāma.
Kaivalyajñāna, manada pariṇāma.
Gamanada bhāvadarivu trividha:
Vaila, vairambhaṇa, mukhaprabhan̄jana.
Antarvaha vāyu bhāvada caritra.
Idara bhēdava kūḍalacennasaṅgā
nim'ma śaraṇanallade
kuhakayōgigaḷavaretta ballaru?