Index   ವಚನ - 1275    Search  
 
ತನ್ನ ಲಿಂಗವ ಶಿಷ್ಯಂಗೆ ಬಿಜಯಂಗೈಸಿ ಕೊಟ್ಟು ಮುಂದೆ ತಾನೇನಾಗುವನೆಲವೊ? ಅವನ ಧರ್ಮಕ್ಕೆ ಗುರುವಾದನಲ್ಲದೆ ಅವನ ಮನಕ್ಕೆ ಗುರುವಾದುದಿಲ್ಲ. ಹಿಂದಾದ ಮುಕ್ತಿಯ ಮಾರಿಕೊಂಡುಂಬ ಭಂಗಗಾರರ ತೋರದಿರಾ ಕೂಡಲಚೆನ್ನಸಂಗಮದೇವಾ.