Index   ವಚನ - 1276    Search  
 
ತನ್ನ ಸತ್ಕಾಯದಿಂದೊದಗಿದ ವಿಶುದ್ಧಪದಾರ್ಥವ ಲಿಂಗಕ್ಕಿತ್ತು, ಆ ಲಿಂಗಪ್ರಸಾದವ ತಾನು ಬೋಗಿಸಬೇಕಲ್ಲದೆ ಇದು ಸ್ಥೂಲ ಇದು ಸೂಕ್ಷ್ಮವೆಂದರಿಯದೆ, ಅಂಗಸುಖಕ್ಕಾಗಿ ಲಿಂಗವನು ಮರೆತು, ಕಂಡ ಕಂಡ ಪದಾರ್ಥವನುಂಡಡೆ ಅದು ಕೆಂಡದಂತಾಗುವುದಯ್ಯಾ. ಈ ಮರ್ಮವನರಿಯದನ್ನಕ್ಕ ಕೂಡಲಚೆನ್ನಸಂಗಯ್ಯನಲ್ಲಿ ಸದ್ಭಕ್ತರೆಂತಪ್ಪರಯ್ಯಾ?