ದಶ ದ್ವಾದಶಂಗಳ ಮೇಲಣ ಬಾಗಿಲಲಿರ್ದು,
ಕಾಲ ಜರಾ ಮರಣವೆಂಬ ಬಾಗಿಲ ಹೊಗದೆ,
ಹೊನ್ನಬಣ್ಣವಾಗದಂತೆ ಮಾಡಿಕೊಂಬುದು.
ಕುಲಸಂಕುಲವಾಗದೆ ದಶದಿಕ್ಕಿನಲ್ಲಿ
ದೇಸಿಗನಾಗದೆ ದೇಶಿಕನಾಗಿರಬೇಕು.
ದಶಸ್ಥಾನಂಗಳ ನೋಡಿ ಲಿಂಗಸ್ಥಾನದಲ್ಲಿ ನಿಂದು,
ಇಂತು ದಶಸಂಪಾದನೆ ಮೂವತ್ತಾರರಿಂದ,
ಸಂಸಾರಮೃಗದ ಮರೀಚಿಕಾಜಲದ ಮಾಯವೆಂದರಿತು,
ನಿಶ್ಚಲ ಮತಿಯಿಂದ ಶುದ್ಧಾತ್ಮಚಿತ್ತರಾಗಿ ಆರಾಧಿಸಬೇಕು
ಕೂಡಲಚೆನ್ನಸಂಗನ ಶರಣರು.
Art
Manuscript
Music
Courtesy:
Transliteration
Daśa dvādaśaṅgaḷa mēlaṇa bāgilalirdu,
kāla jarā maraṇavemba bāgila hogade,
honnabaṇṇavāgadante māḍikombudu.
Kulasaṅkulavāgade daśadikkinalli
dēsiganāgade dēśikanāgirabēku.
Daśasthānaṅgaḷa nōḍi liṅgasthānadalli nindu,
intu daśasampādane mūvattārarinda,
sansāramr̥gada marīcikājalada māyavendaritu,
niścala matiyinda śud'dhātmacittarāgi ārādhisabēku
kūḍalacennasaṅgana śaraṇaru.