Index   ವಚನ - 1308    Search  
 
ದಾಸಿಯ ಸಂಗ, ಭಂಗಿಯ ಸೇವನೆ, ವೇಶಿಯ ಸಂಗ, ಸುರೆಯ ಸೇವನೆ, ಪರಸ್ತ್ರೀಯರ ಸಂಗ, ಮಾಂಸದ ಸೇವನೆ. ಮುಂಡೆಯ ಸಂಗ, ಅಮೇಧ್ಯದ ಸೇವನೆ. ಕನ್ನೆಯ ಸಂಗ, ರಕ್ತದ ಸೇವನೆ- ಇಂತೀ ಐವರ ಸಂಗವ ಮಾಡುವ ದ್ರೋಹಿಗೆ ಕಂಠಪಾವಡ, ಧೂಳಪಾವಡ, ಸರ್ವಾಂಗಪಾವಡ ಉಂಟೆಂಬ ಪಂಚಮಹಾಪಾತಕರಿಗೆ, ಗುರುವಿಲ್ಲ ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ ನಾ) ಮೊದಲೇ ಇಲ್ಲ, ಕೂಡಲಚೆನ್ನಸಂಗಮದೇವಾ.