ದೇವರು ಬಿದ್ದರು ದೇವರು ಬಿದ್ದರು ಎಂದು
ಸಾಹಿತ್ಯದ ಕೂಡ ಸಾಯಬೇಕೆಂಬಿರಿ.
ಆವಾಗ ಬಿದ್ದಿತ್ತೆಂದರಿಯಿರಿ
ಆವಾಗ ಇದ್ದಿತ್ತೆಂದರಿಯಿರಿ,
ಆವಾಗ ಇದ್ದಿತ್ತು ಆವಾಗ ಬಿದ್ದಿತ್ತು
ಎಂದು ಬಲ್ಲರೆ ನೀವು ಹೇಳಿರೆ?
"ಅದೃಶ್ಯಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ|
ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ"||
ಎಂದುದಾಗಿ, ಇದು ಕಾರಣ
ಕೂಡಲಚೆನ್ನಸಂಗಯ್ಯನ
ಅರಿದಾಗಲಿದ್ದಿತ್ತು ಮರೆದಾಗ ಬಿದ್ದಿತ್ತು.