Index   ವಚನ - 1313    Search  
 
ದೇವ ದೇವ ಮಹಾಪ್ರಸಾದ, ನಿಮ್ಮಡಿಗಳಿಗೆ ಉತ್ತರಕೊಡಲಮ್ಮೆನಯ್ಯಾ, [ಇದ] ಬಲ್ಲೆನೆಂಬ ಬಲುಮೆಯ ದೇಹಿ ನೀವಲ್ಲವಾಗಿ, ಆನು ಭಕ್ತನೆಂಬ ಭಕ್ತಿಶೂನ್ಯನಲ್ಲವಾಗಿ ಆನು ಬಲ್ಲೆನೆಂಬ ನುಡಿ ಎನ್ನನಿರಿದಿರಿದು ಸುಡದೆ? ತಪ್ಪೆನ್ನದು ಕ್ಷಮೆ ನಿಮ್ಮದು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಕೊಲ್ಲು, ಕಾಯಿ, ನಿಮ್ಮ ಧರ್ಮ.