ನರರು ಸುರರು ನವಕೋಟಿ ಯುಗಗಳ
ಪ್ರಳಯಕ್ಕೆ ಒಳಗಾಗಿ ಹೋದರು,
ಒಳಗಾಗಿ ಹೋಹಲ್ಲಿ ಸುರಪತಿಗೆ
ಪರಮಾಯು ನೋಡಿರೆ!
ಅಂಥ ಸುರಪತಿ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ,
ಚಿಟ್ಟಜನೆಂಬ ಋಷಿಗೆ ಒಂದು
ಚಿಟ್ಟು ಸಡಿಲಿತ್ತು ನೋಡಿರೆ!
ಅಂಥ ಚಿಟ್ಟನೆಂಬ ಋಷಿ
ನವಕೋಟಿಯುಗಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ ಚಿಪ್ಪಜನೆಂಬ ಋಷಿಗೆ
ಒಂದು ಚಿಪ್ಪು ಸಡಿಲಿತ್ತು ನೋಡಿರೆ!
ಅಂಥ ಚಿಪ್ಪಜನೆಂಬ ಋಷಿ
ನವಕೋಟಿಯುಗ ಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ
ಡೊಂಕಜನೆಂಬ ಋಷಿಗೆ
ಒಂದು ಡೊಂಕು ಸಡಿಲಿತ್ತು ನೋಡಿರೆ!
ಅಂಥ ಡೊಂಕಜನೆಂಬ ಋಷಿ
ನವಕೋಟಿಯುಗ ಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ
ರೋಮಜನೆಂಬ ಋಷಿಗೆ
ಒಂದು ರೋಮ ಸಡಿಲಿತ್ತು ನೋಡಿರೆ!
ಅಂಥ ರೋಮಜನೆಂಬ ಋಷಿ
ನವಕೋಟಿಯುಗ ಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ
ಆದಿಬ್ರಹ್ಮಂಗೆ ಆಯುಷ್ಯವು
ನೂರಾಯಿತ್ತು ನೋಡಿರೆ!
ಅಂಥ ಆದಿಬ್ರಹ್ಮ ನವಕೋಟಿಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಆದಿನಾರಾಯಣಂಗೆ
ಒಂದು ದಿನವಾಯಿತ್ತು ನೋಡಿರೆ!
ಅಂಥ ಆದಿ ನಾರಾಯಣ
ನವಕೋಟಿಯುಗ ಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ ರುದ್ರಂಗೆ
ಕಣ್ಣೆವೆ ಹಳಚಿತ್ತು ನೋಡಿರೆ!
ಅಂಥ ರುದ್ರರು ನವಕೋಟಿಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಫಣಿಮುಖರೊಂದು ಕೋಟಿ,
ಪಂಚಮುಖರೊಂದು ಕೋಟಿ,
ಷಣ್ಮಮುಖರೊಂದು ಕೋಟಿ,
ಸಪ್ತಮುಖರೊಂದು ಕೋಟಿ
ಅಷ್ಟಮೂಖರೊಂದು ಕೋಟಿ,
ನವಮುಖರೊಂದು ಕೋಟಿ
ದಶಮುಖರೊಂದು ಕೋಟಿ- ಇಂತಿವರೆಲ್ಲರ
ಕೀರೀಟದಾಭರಣಂಗಳು ಬಿದ್ದವು ನೋಡಿರೆ!
ಅಂಥ ಸಪ್ತಕೋಟಿಗಳು
ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ನಂದಿವಾಹನರೊಂದು ಕೋಟಿ,
ಭೃಂಗಿ ಪ್ರಿಯರೊಂದು ಕೋಟಿ
ಚಂದ್ರಪ್ರಿಯರೊಂದು ಕೋಟಿ-
ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ!
ಅಂಥ ತ್ರಿಕೋಟಿಗಳ ತಲೆಗಳು
ನವಕೋಟಿಯುಗ ಪ್ರಳಯಕ್ಕೆ
ಒಳಗಾಗಿ ಹೋಹಲ್ಲಿ
ಕೂಡಲಚೆನ್ನಸಂಗಯ್ಯಾ
ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು.
Art
Manuscript
Music
Courtesy:
Transliteration
Nararu suraru navakōṭi yugagaḷa
praḷayakke oḷagāgi hōdaru,
oḷagāgi hōhalli surapatige
paramāyu nōḍire!
Antha surapati navakōṭi yuga
praḷayakke oḷagāgi hōhalli,
ciṭṭajanemba r̥ṣige ondu
ciṭṭu saḍilittu nōḍire!
Antha ciṭṭanemba r̥ṣi
navakōṭiyugapraḷayakke
oḷagāgi hōhalli cippajanemba r̥ṣige
ondu cippu saḍilittu nōḍire!
Antha cippajanemba r̥ṣi
navakōṭiyuga praḷayakke
oḷagāgi hōhalli
Ḍoṅkajanemba r̥ṣige
ondu ḍoṅku saḍilittu nōḍire!
Antha ḍoṅkajanemba r̥ṣi
navakōṭiyuga praḷayakke
oḷagāgi hōhalli
rōmajanemba r̥ṣige
ondu rōma saḍilittu nōḍire!
Antha rōmajanemba r̥ṣi
navakōṭiyuga praḷayakke
oḷagāgi hōhalli
ādibrahmaṅge āyuṣyavu
nūrāyittu nōḍire!
Antha ādibrahma navakōṭiyuga
praḷayakke oḷagāgi hōhalli
ādinārāyaṇaṅge
ondu dinavāyittu nōḍire!
Antha ādi nārāyaṇa
Navakōṭiyuga praḷayakke
oḷagāgi hōhalli rudraṅge
kaṇṇeve haḷacittu nōḍire!
Antha rudraru navakōṭiyuga
praḷayakke oḷagāgi hōhalli
phaṇimukharondu kōṭi,
pan̄camukharondu kōṭi,
ṣaṇmamukharondu kōṭi,
saptamukharondu kōṭi
aṣṭamūkharondu kōṭi,
navamukharondu kōṭi
daśamukharondu kōṭi- intivarellara
kīrīṭadābharaṇaṅgaḷu biddavu nōḍire!
Antha saptakōṭigaḷu
navakōṭiyuga praḷayakke oḷagāgi hōhalli
nandivāhanarondu kōṭi,
bhr̥ṅgi priyarondu kōṭi
candrapriyarondu kōṭi-
intī trikōṭigaḷa talegaḷu bāgidavu nōḍire!
Antha trikōṭigaḷa talegaḷu
navakōṭiyuga praḷayakke
oḷagāgi hōhalli
kūḍalacennasaṅgayyā
nam'ma basavaṇṇanī suddiyanēnenduvariyanu.