ನರಸುರಾದಿಗಳೆಲ್ಲರು
ನಿಮ್ಮ ಹೊರೆಯೊಳಗಿದ್ದರು,
ಮನು ಮುನಿ ಯತಿ ವ್ರತಿಗಳೆಲ್ಲರು
ನಿಮ್ಮ ತೋಹಿನೊಳಗಿದ್ದರು.
ಗಂಗೆವಾಳುಕರೆಲ್ಲರು
ನಿಮ್ಮ ಮಡಿಯೊಳಗಿದ್ದರು.
ಗಂಗೆ ಗೌರೀವಲ್ಲಭರೆಲ್ಲರು,
ಚತುರ್ಮುಖ, ಪಂಚಮುಖ,
ಷಣ್ಮಖ, ದಶಮುಖರೆಲ್ಲರು
ನಿಮ್ಮ ಮಡಿಯ ಗಳಿಗೆಯೊಳಗಿದ್ದರು.
ಲೋಕಾದಿ ಲೋಕವೆಲ್ಲವು
ನಿಮ್ಮ ಕುಕ್ಷಿಯೊಳಗು.
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ,
ನಿಮ್ಮ ನಿರಾಳದ ಪ್ರಸಾದದಿಂದ
ನಿರವಯಲ ಹಾದಿಯ ಕಂಡೆನಲ್ಲದೆ,
ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ.
Art
Manuscript
Music
Courtesy:
Transliteration
Narasurādigaḷellaru
nim'ma horeyoḷagiddaru,
manu muni yati vratigaḷellaru
nim'ma tōhinoḷagiddaru.
Gaṅgevāḷukarellaru
nim'ma maḍiyoḷagiddaru.
Gaṅge gaurīvallabharellaru,
caturmukha, pan̄camukha,
ṣaṇmakha, daśamukharellaru
nim'ma maḍiya gaḷigeyoḷagiddaru.
Lōkādi lōkavellavu
nim'ma kukṣiyoḷagu.
Kūḍalacennasaṅgamadēvaru sākṣiyāgi,
nim'ma nirāḷada prasādadinda
niravayala hādiya kaṇḍenallade,
nim'mindalānu ghanave maḍivāḷa mācayyā.