Index   ವಚನ - 1328    Search  
 
ನವಸೂತ್ರ ಪಟ್ಟಣಕ್ಕೆ ನವದ್ವಾರ ಬೀದಿಯೊಳು, ನವ ಲಿಂಗಸ್ಥಾವರಕ್ಕೆ ನವ ಕಳಸವು ನವದೀಪ, ನವಧೂಪ, ನವಮಂತ್ರ, ನವಪೂಜೆ, ನವಜಪ ನಮೋ ನಮೋ ಎನುತಿರ್ದೆನು ಕೂಡಲಚೆನ್ನಸಂಗಯ್ಯಾ ನಿಮ್ಮ ಬಸವಣ್ಣಂಗೆ.