Index   ವಚನ - 1334    Search  
 
ನಾನೊಂದ ತೋರಲರಿಯೆನು, ನಾನೊಂದ ಹೇಳಲರಿಯೆನು, ನಾನೊಂದ ಸ್ಥಲವಿಡಲರಿಯೆನು, ಕುಲವಿಡಲರಿಯೆನು. ಕೂಡಲಚೆನ್ನಸಂಗಮದೇವರಲ್ಲಿ ಮಡಿವಾಳನ ನಿಲವ ನಾನೆತ್ತ ಬಲ್ಲೆನಯ್ಯಾ, ಸಂಗನಬಸವಣ್ಣಾ.