Index   ವಚನ - 1341    Search  
 
ನಿಧಾನವನಗೆವೆನೆಂದು ಹೋದರೆ ವಿಘ್ನ ಬಪ್ಪುದು ಮಾಬುದೆ ಅಯ್ಯಾ? ಸದಾಶಿವನ ಪೂಜಿಸುವೆನೆಂದು ಹೋದಡೆ ಕದುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು. ಎದೆ ಭಂಗವಿಲ್ಲದೆ ನಿಲ್ಲಬಲ್ಲಡೆ ಸದಮಲ ಸುಖವನೀವ ನಮ್ಮ ಕೂಡಲಚೆನ್ನಸಂಗಮದೇವ.