Index   ವಚನ - 1344    Search  
 
ನಿಮ್ಮ ಗುರುಗಳು ಪಲ್ಲಕ್ಕಿಯಲ್ಲಿ, ನಮ್ಮ ಪರಮಗುರು ನಂದಿವಾಹನದಲ್ಲಿ ವಿರಾಜಿಪ ಪರಿ ನಿನ್ನ ಮನಕ್ಕೆ ವೇದ್ಯವೆ? ಗುರುಶಿಷ್ಯರ ಭಾವದ ಗೌರವ ನೀ ಬಲ್ಲೆಯಲ್ಲದೆ ಮತ್ತಾರಯ್ಯಾ ಕೂಡಲಚೆನ್ನಸಂಗಮದೇವಾ.