ನೇಮಸ್ತನಿಂದ ಮಹಾಪಾಪಿ ಲೇಸು,
ಅವನಿಂದ ಭೂಮಿಯ ಮೇಲೆ ಹುಟ್ಟಿದ
ಸಮಸ್ತಪ್ರಾಣಿಯ ಕೊಲುವ ವ್ಯಾಧ ಲೇಸು.
ಅವನಿಂದ ಅನಂತಕೋಟಿ ನರಕವನೈದುವರು,
ಆ ನೇಮಸ್ತನೆಂಬ ಮಹಾಪಾಪಿಯ ಮುಖವ ನೋಡಿ
ಅವನ ಒಡಗೂಡಿಕೊಂಡು ನಡೆದವರು;
ಅದೆಂತೆಂದಡೆ:
"ನೇಮಸ್ತಯೋ ಮಹಾಪಾಪೀ ತೇನ ದರ್ಶಂತೇ ಯೋ ನರಃ|
ಭೌತಿಕಂ ತತ್ತ್ವಪರ್ಯಂತಂ ನರಕಂ ಯಾಂತಿ ಸ ಧ್ರುವಂ"|| ಇಂತೆಂದುದಾಗಿ-
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನೇಮಸ್ತರಾದ ಪಾಪಿಗಳನೆನಗೆ ತೋರದಿರಯ್ಯಾ.