Index   ವಚನ - 1358    Search  
 
ನೋಡುವುದೊಂದು ನೋಡಿಸಿಕೊಂಬುದೊಂದು ಇನ್ನು ನಿನ್ನಲ್ಲಿ ಎರಡುಂಟಲ್ಲ! ಕರಸ್ಥಲದಲ್ಲಿ ಒಂದು, ಮನಸ್ಥಲದಲ್ಲಿ ಒಂದು, ಇನ್ನೂ ನಿನ್ನಲ್ಲಿ ಎರಡುಂಟಲ್ಲಾ! ಕೂಡಲಚೆನ್ನಸಂಗಯ್ಯನಲ್ಲಿ ಗುಹೇಶ್ವರನೆಂಬ ಲಿಂಗವು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ?