Index   ವಚನ - 1361    Search  
 
ಪಂಚೇಂದ್ರಿಯಂಗಳ ಮುಖಂಗಳಲ್ಲಿ ಅಲ್ಲಲ್ಲಿ ತಾಗಿದ ಸುಖವ ಸುಖಿಸಿ ಲಿಂಗಾರ್ಪಿತವೆಂಬರು. ಅದು ಲಿಂಗಾರ್ಪಿತವೆ? ಅಲ್ಲಲ್ಲ. ಅರ್ಪಿತವ ಮಾಡದೆ, ಅನರ್ಪಿತವ ಹೊದ್ದದೆ ಅರ್ಪಿಸಬೇಕು. ಅರ್ಪಿಸುವ ಈ ಭೇದವುಳ್ಳನ್ನಕ್ಕ ಶರಣನೆನಿಸಬಾರದು. ಕೂಡಲಚೆನ್ನಸಂಗಯ್ಯಾ.