Index   ವಚನ - 1373    Search  
 
ಪರಮೂತ್ರದ ಕುಳಿಯನಗುಳುವಂಗೆ ಚಿಲುಮೆಯಗ್ಗಣಿಯೆಂಬ ಕಟ್ಟಳೆ ಏತಕಯ್ಯಾ? ಪರನಾರಿಯರ ಅಧರಪಾನವ ಕೊಂಬವಂಗೆ ಸ್ವಯಪಾಕದ ಕಟ್ಟಳೆ ಏತಕಯ್ಯಾ? ದುಷ್ಟಸ್ತ್ರೀಯರನಾಳಿಪ್ಪಂಗೆ ಗುರುವಿನ ಪ್ರಸಾದವಿಲ್ಲ, ಬೆಕ್ಕ ಸಲಹಿಪ್ಪಂಗೆ ಲಿಂಗದ ಪ್ರಸಾದವಿಲ್ಲ. ಇಂತೀ ತ್ರಿವಿಧವ ಸಲಹಿದ ದ್ರೋಹಿಗೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.