Index   ವಚನ - 1392    Search  
 
ಪೃಥ್ವಿಗೆ ಹುಟ್ಟಿದ ಪಾಷಾಣ, ಬಿನ್ನಣಿಗೆ ಹುಟ್ಟಿದ ಪ್ರತಿಮೆ, ಮಂತ್ರಕ್ಕೆ ಹುಟ್ಟಿದ ಮೂರ್ತಿ, ಗುರುವಿಂಗೆ ಹುಟ್ಟಿದ ಲಿಂಗ- ಇಂತೀ ಚತುರ್ವಿಧದ ಕೈಗೆ ಕೈಗೆ ಬಾಯ್ಗೆ ಬಾಯ್ಗೆ ಬರಲಾಗಿ, ಹೇಸಿ ಲಿಂಗವೆಂದು ಮುಟ್ಟಿ ಪೂಜೆಯ ಮಾಡೆ ಕಾಣಾ ಕೂಡಲಚೆನ್ನಸಂಗಮದೇವಾ.