Index   ವಚನ - 1410    Search  
 
ಪ್ರಾಣಲಿಂಗದಲ್ಲಿ ಪ್ರವೇಶಿಯಾಗಿ, ಪ್ರಸಾದದಲ್ಲಿ ಸನ್ನಹಿತನಯ್ಯಾ. ಪ್ರಸಾದದಲ್ಲಿ ಸನ್ನಿಹಿತನಾಗಿ ಪ್ರಾಣಲಿಂಗದಲ್ಲಿ ಪ್ರವೇಶಿಯಯ್ಯಾ. ಲಿಂಗಾರ್ಪಿತವನಲ್ಲದೆ ಅನರ್ಪಿತವ ಮುಟ್ಟಲೀಯನಯ್ಯಾ. ಅಂಗಗುಣಂಗಳನೆಲ್ಲವ ಕಳೆದು ಪ್ರಸಾದಬ್ರಹ್ಮಚಾರಿ, ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.