Index   ವಚನ - 1435    Search  
 
ಬೇಡವೊ ಇಲಿಚಯ್ಯಾ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ, ಇಂದು ಬಂದು ನಮ್ಮ ವಸ್ತ್ರವ ಕಡಿದೆ. ಬೇಡವೋ ಇಲಿಚಯ್ಯಾ! ನಿನಗಂಜರು, ನಿನ್ನ ಗಣಪತಿಗಂಜರು; ಕೂಡಲಚೆನ್ನಸಂಗನ ಶರಣರು ಕಂಡಡೆ, ನಿನ್ನ ಹಲ್ಲ ಕಳೆವರು, ಹಂತವ ಮುರಿವರು.