Index   ವಚನ - 1438    Search  
 
ಬೊಬ್ಬೆಯ ಬಾಯಿ, ಬಾಚದ ಮಂಡೆ, ಮೀರಿದ ಶರಣಂಗಲ್ಲದೆ ಇಲ್ಲ. ಓಡಿನ ಊಟ, ಕಾಡಿನಲ್ಲಿ ಇಕ್ಕೆ, ಮೀರಿದ ಶರಣಂಗಲ್ಲದೆ ಇಲ್ಲ. "ವಿರಕ್ತೋ ವಾsಥ ಯುಕ್ತೋ ವಾ ಸಸ್ತ್ರ್ಯಾದಿವಿಷಯೇಷ್ವಪಿ| ಪಾಪೈರ್ನೈವಪ್ರಲಿಪ್ಯೇತ ಪದ್ಮ ಪತ್ರಮಿವಾಂಭಸಾ"|| ಎಂದುದಾಗಿ, ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣರು ಮಲೆಯೊಳಗಿರ್ದಡೇನು? ಮೊಲೆಯೊಳಗಿರ್ದಡೇನು?