Index   ವಚನ - 1441    Search  
 
ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ, ಶೂದ್ರದೇಹಿಕನಲ್ಲ, ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು. ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು. ಲೈಂಗ್ಯಪುರಾಣೇಃ "ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವಿಃ| ಲಿಂಗಾರ್ಚಕಶ್ಚ ಶ್ವಪಚೋದ್ವಿಜಕೋಟಿವಿಶೇಷಿತಃ"||ಎಂದುದಾಗಿ, ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ ಆತನೆ ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದುಕೋಟಿಯಾದಡೆಯೂ ಶ್ವಪಚರಿಂದ ಕರಕಷ್ಟ ನೋಡಾ, ಕೂಡಲಚೆನ್ನಸಂಗಮದೇವಾ.