Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1461 
Search
 
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜಳ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು.
Art
Manuscript
Music
Your browser does not support the audio tag.
Courtesy:
Video
Transliteration
Bhaktiyuktiya holaba ballavara, mūrulōkadoḷagāranū kāṇe. Liṅgadalli bhaktiya māḍidaḍe bhava hariyadendu jaṅgamamukha liṅgavendaridu arcisi pūjisi dāsōhava māḍi prasannateya haḍeda basavaṇṇanu. Ā prasannateya ruciyanupamisabāradu. Ā basavaṇṇana prasādava koṇḍu nānu badukidenu. Ā basavaṇṇana bhaktiprasādava koṇḍu allamaprabhu tr̥ptanādanu. Allamaprabhu koṇḍa prasādada tr̥pti lakṣadamēle tombattārusāvira Jaṅgama tr̥ptiyāyitu; ā lakṣada mēle tombattārusāvira jaṅgama tr̥ptiyādalli sacarācaravella kūḍe tr̥ptiyāyittendaḍe, illavendu bijjaḷa tarkisalu, kappeya oḍaloḷage prabhuvina prasādava tōrane basavaṇṇanu? Idu kāraṇa kūḍalacennasaṅgamadēvaralli basavaṇṇa prabhudēvara prasādada ghanavu trailōkyadoḷage beḷavigeyāyittu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: