Index   ವಚನ - 1463    Search  
 
ಭರಿತ ಭೋಜನ ಭರಿತ ಭೋಜನವೆಂದೆಂಬಿರಿ. ಭರಿತ ಭೋಜನವಾವುದು ಬಲ್ಲಡೆ ನೀವು [ಹೇಳಿರೆ ಲಿಂಗವಂತ]ರಿರಾ. ಗುರುವಿನಲ್ಲಿ ತನುಭರಿತ, ಲಿಂಗದಲ್ಲಿ ಮನಭರಿತ, ಜಂಗಮದಲ್ಲಿ ಧನ ಭರಿತ. ಇಂತೀ[ಭರಿತ]ವೆಂಬ ಭಾಜನದಲ್ಲಿ ಗಡಣಿಸಬಲ್ಲಡೆ ಭರಿತ ಕಾಣಿರೇ ಲಿಂಗವಂತರಿರಾ, ಗುರುಲಿಂಗವೆಂಬುದೇ ಶಿವಲಿಂಗ, ಶಿವಲಿಂಗವೆಂಬುದೇ ಜಂಗಮಲಿಂಗ, ಗುರುಲಿಂಗದಲ್ಲಿ ಸಂಪದವು, ಶಿವಲಿಂಗದಲ್ಲಿ ........ ಜಂಗಮ ಲಿಂಗದಲ್ಲಿ ಮಹಾಪದವು. ಇಂತೆಂದುದಾಗಿ ಷೋಡಶ ಕೈಯಲ್ಲಿ ಹಿಡಿದು ಎಡಹಿಗುಳಿ ........ಕಾಣಾ ಕೂಡಲ ಚೆನ್ನಸಂಗಮದೇವರು.