Index   ವಚನ - 1467    Search  
 
ಭವಿಗೆ ಭವವಿಲ್ಲ, ಭಕ್ತಂಗೆ ಭವಿಯನೊಲ್ಲೆನೆಂಬುದು ದುರಾಚಾರ. ದೇವರಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆಂದೆ, ಲಿಂಗಾರಾಧನೆಯ ಫಲವುಳ್ಳನ್ನಕ್ಕರ ಭಕ್ತರೆ? ಭವಿಗೆ ಮಾಡುವ ಪದಾರ್ಥವನತಿ ಸುಯಿದಾನದಲ್ಲಿ ಮಾಡಬೇಕು. ಭಕ್ತಕಂಡಡೆ ಮುಟ್ಟಪಡವಾಯಿತಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯ, ಭಕ್ತನಾಗಿ ಭವಿಯಾಗದಿರ್ದಡೆ ಅವರನೆಂತು ಭಕ್ತರೆಂಬೆ?