ಭವಿತನಕ್ಕೆ ಹೇಸಿಭಕ್ತನಾದಹೆನೆಂದರೆ,
ಆ ಭವಿಯ ಪೂರ್ವಾಶ್ರಯವ ಕಳೆದು ಭಕ್ತನ
ಮಾಡುವ ಪರಿಯೆಂತುಂಟಯ್ಯಾ?
ಆತನ ಕಾಯಶುದ್ಧನ ಮಾಡುವುದು, ಜೀವಶುದ್ಧನ ಮಾಡುವುದು,
ಆತ್ಮಶುದ್ಧನ ಮಾಡುವುದು, ಮಂತ್ರಶುದ್ಧನ ಮಾಡುವುದು,
ವಾಕು ಪಾಣಿ ಪಾದ ಪಾಯು ಗುಹ್ಯವೆಂಬ
ಕರ್ಮೇಂದ್ರಿಯಂಗಳ ಶುದ್ಧನ ಮಾಡುವುದು.
ಶ್ರೋತ್ರ ನೇತ್ರ ಜಿಹ್ವೆ ತ್ವಕ್ಕು ಘ್ರಾಣವೆಂಬ
ಬುದ್ಧೀಂದ್ರಿಯಂಗಳ ಶುದ್ಧನ ಮಾಡುವುದು.
ಸುತ್ತಿರ್ದ ಮಾಯಾಪ್ರಪಂಚಮಂ ಬಿಡಿಸಿ,
ಜೀವನೆ ಶಿವನೆಂಬ ಪರಿಯಾಯಮಂ ಕೆಡಿಸಿ
ಶಿವನೆ ಜೀವನೆಂಬ ಪರಿಯಾಯಮಂ ತೋರಿ
ಜೀವಶುದ್ಧನ ಮಾಡುವುದು.
ಪಂಚಭೂತಂಗಳ ಅಧಿದೇವತೆಗಳಂ ತೋರಿ
ಪಂಚವಕ್ತ್ರಂಗಳಂ ನೆಲೆಗೊಳಿಸಿ
ಅವರ ವರ್ಣ-ಶ್ವೇತ ಪೀತ ಹರಿತ ಕಪೋತ ಮಾಂಜಿಷ್ಟ
ಗೌರವರ್ಣಂಗಳಂ ತೋರಿ ಪಂಚಭೂತಶುದ್ಧನಂ ಮಾಡುವುದು.
`ಜೀವಾತ್ಮಾ ಪರಮಾತ್ಮಾ ಚ' ಎಂಬ ಶ್ರುತಿಯಿಂದ,
ಆತ್ಮಶುದ್ಧನ ಮಾಡುವುದು,
ಇಂತು ಸರ್ವಶುದ್ಧನ ಮಾಡುವುದು.
ಆತನಂ ತಂದು ಗಣತಿಂಥಿಣಿಯ ಮುಂದೆ ನಿಲಿಸಿ,
"ಕರ್ಮಣಾ ಮನಸಾ ವಾಚಾ ಗುರುಭಕ್ತ್ಯಾ ತು ವತ್ಸಲಃ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್"
ಎಂದು ಮನಃ ಸ್ಮರಣೆಯಂ ಮಾಡಿಸಿ,
ಶಿಷ್ಯನ ಭವಚ್ಛೇದನಂ ಮಾಡಿ ಚೌಕಮಧ್ಯದಲ್ಲಿ ಕುಳ್ಳಿರಿಸಿ,
`ಓಂ ಸಮೇ ಕಾಮಾನ್ ಕಾಮ ಕಾಮಾಯ ಮಹ್ಯಂ'
ಎಂಬ ಮಂತ್ರದಿಂದ ಅಗ್ರೋದಕವಂ ತಳಿದು,
ಭಾಳದಲ್ಲಿ ವಿಭೂತಿಯ ಪಟ್ಟವಂ ಕಟ್ಟಿ
ಮಸ್ತಕದ ಕಳಸದ ಮೇಲೆ ಹಸ್ತವನ್ನಿಳುಹಿ,
[ಸಹಸ್ರದಳ]ಕಮಳದೊಳಗಿಪ್ಪ ಮಾನಸ ಪೃಥ್ವಿಯಿಂದ
ಪ್ರಾಣಲಿಂಗಸ್ಥಳಮಂ ತೋರಿ, ಸ್ಥಾವರ ಪೂಜೆಯಂ ಮಾಣಿಸಿ,
ಎನ್ನ ಕೃತಾರ್ಥನಂ ಮಾಡಿದ ಕೂಡಲಚೆನ್ನಸಂಗಯ್ಯಾ,
ನಿಮ್ಮ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ.
Art
Manuscript
Music
Courtesy:
Transliteration
Bhavitanakke hēsibhaktanādahenendare,
ā bhaviya pūrvāśrayava kaḷedu bhaktana
māḍuva pariyentuṇṭayyā?
Ātana kāyaśud'dhana māḍuvudu, jīvaśud'dhana māḍuvudu,
ātmaśud'dhana māḍuvudu, mantraśud'dhana māḍuvudu,
vāku pāṇi pāda pāyu guhyavemba
karmēndriyaṅgaḷa śud'dhana māḍuvudu.
Śrōtra nētra jihve tvakku ghrāṇavemba
bud'dhīndriyaṅgaḷa śud'dhana māḍuvudu.
Suttirda māyāprapan̄camaṁ biḍisi,
jīvane śivanemba pariyāyamaṁ keḍisi
śivane jīvanemba pariyāyamaṁ tōri
jīvaśud'dhana māḍuvudu.
Pan̄cabhūtaṅgaḷa adhidēvategaḷaṁ tōri
Pan̄cavaktraṅgaḷaṁ nelegoḷisi
avara varṇa-śvēta pīta harita kapōta mān̄jiṣṭa
gauravarṇaṅgaḷaṁ tōri pan̄cabhūtaśud'dhanaṁ māḍuvudu.
`Jīvātmā paramātmā ca' emba śrutiyinda,
ātmaśud'dhana māḍuvudu,
intu sarvaśud'dhana māḍuvudu.
Ātanaṁ tandu gaṇatinthiṇiya munde nilisi,
karmaṇā manasā vācā gurubhaktyā tu vatsalaḥ
śarīramarthaṁ prāṇaṁ ca sadgurubhyō nivēdayēt
endu manaḥ smaraṇeyaṁ māḍisi,
śiṣyana bhavacchēdanaṁ māḍi caukamadhyadalli kuḷḷirisi,
`ōṁ samē kāmān kāma kāmāya mahyaṁ'
Emba mantradinda agrōdakavaṁ taḷidu,
bhāḷadalli vibhūtiya paṭṭavaṁ kaṭṭi
mastakada kaḷasada mēle hastavanniḷuhi,
[sahasradaḷa]kamaḷadoḷagippa mānasa pr̥thviyinda
prāṇaliṅgasthaḷamaṁ tōri, sthāvara pūjeyaṁ māṇisi,
enna kr̥tārthanaṁ māḍida kūḍalacennasaṅgayyā,
nim'ma saṅganabasavaṇṇana śrīpādakke namō namō.