Index   ವಚನ - 1470    Search  
 
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು ಸದ್ಗುರುವನರಸಿಕೊಂಡು ಬಂದು, ಅವರ ಕಾರುಣ್ಯದಿಂದ ಮುಕ್ತಿಯಂ ಪಡೆದೆನೆಂದು, ಆ ಶ್ರೀಗುರುವಿಂಗೆ ದಂಡಪ್ರಣಾಮಂ ಮಾಡಿ, ಭಯಭಕ್ತಿಯಿಂದ ಕರಂಗಳಂ ಮುಗಿದು ನಿಂದಿರ್ದು, ಎಲೆ ದೇವಾ! ಎನ್ನ ಭವಿತನಂ ಹಿಂಗಿಸಿ, ನಿಮ್ಮ ಕಾರುಣ್ಯದಿಂದೆನ್ನ ಭಕ್ತನಂ ಮಾಡುವುದೆಂದು ಶ್ರೀಗುರುವಿಂಗೆ ಬಿನ್ನಹವಂ ಮಾಡಲು, ಆ ಶ್ರೀಗುರುವು ಅಂತಪ್ಪ ಭಯಭಕ್ತಿ ಕಿಂಕರತೆಯೊಳಿಪ್ಪ ಶಿಶುವಂ ಕಂಡು ತಮ್ಮ ಕೃಪಾವಲೋಕನದಿಂ ನೋಡಿ, ಆ ಭವಿಯ ಪೂರ್ವಾಶ್ರಯಮಂ ಕಳೆದು, ಪೂನರ್ಜಾತನಂ ಮಾಡಿ ಆತನ ಅಂಗದ ಮೇಲೆ ಲಿಂಗಪ್ರತಿಷ್ಠೆಯಂ ಮಾಡುವ ಕ್ರಮವೆಂತೆಂದಡೆ: “ಓಂ ಅಗ್ನಿರಿತಿ ಭಸ್ಮ ಓಂ ವಾಯುರಿತಿ ಭಸ್ಮ ಓಂ ಜಲಮಿತಿ ಭಸ್ಮ ಓಂ ಸ್ಥಲಮಿತಿ ಭಸ್ಮ ಓಂ ವ್ಯೋಮೇತಿ ಭಸ್ಮ ಓಂ ಸೋಮೇತಿ ಭಸ್ಮ ಓಂ ಸೂರ್ಯೇತಿ ಭಸ್ಮ ಓಂ ಆತ್ಮೇತಿ ಭಸ್ಮ” ಎಂಬೀ ಮಂತ್ರದಿಂದ ಆತನ ಅಷ್ಟತನುವಂ ಶುದ್ಧವ ಮಾಡುವುದು. ಇನ್ನು ಆತನ ಜೀವ ಶುದ್ಧವ ಮಾಡುವ ಕ್ರಮವೆಂತೆಂದಡೆ: “ಓಂ ಅಸ್ಯ ಪ್ರಾಣಪ್ರತಿಷ್ಠಾ ಮಂತ್ರಸ್ಯ ಬ್ರಹ್ಮವಿಷ್ಣು ಮಹೇಶ್ವರಾ ಋಷಯಃ ಋಗ್ಯಜುಃ ಸಾಮಾಥರ್ವಣಾ ಶ್ಫಂದಾಂಸಿ ಸದಾಶಿವ ಮಹಾಪ್ರಾಣ ಇಹಪ್ರಾಣ ಮಮ ಜೀವ ಅಯಂ ತಥಾ ಮಮಾಸಕ್ತ ಸರ್ವೇಂದ್ರಿಯಾಣಿ ವಾಙ್ಮನಶ್ಚಕ್ಷುಃ ಶ್ರೋತ್ರ ಜಿಹ್ವಾಘ್ರಾಣ ಮನೋಬುದ್ಧಿ ಚಿತ್ತ ವಿಜ್ಞಾನಮ್ ಮಮ ಶರೀರೇ ಅಂಗಸ್ಯ ಸುಖಂ ಸ್ಥಿರಿಷ್ಯತಿ ಜೀವಃ ಶಿವಃ ಶಿವೋ ಜೀವಃ ಸಜೀವಃ ಕೇವಲಃ ಶಿವಃ ಪಾಶಬದ್ಧೋ ಭವೇಜ್ಜೀವಃ ಪಾಶಮುಕ್ತಃ ಶದಾಶಿವಃ“ ಎಂದೀ ಮಂತ್ರದಿಂದ ಆತನ ಜೀವನ ಶುದ್ಧವಂ ಮಾಡುವುದು. ಇನ್ನು ಆತ್ಮಶುದ್ದವ ಮಾಡುವ ಕ್ರಮವೆಂತೆಂದಡೆ: “ಓಂ ಶಿವಾತ್ಮಕಸುಖಂ ಜೀವೋ ಜೀವಾತ್ಮಕಸುಖಂ ಶಿವಃ ಶಿವಜೀವಾತ್ಮಸಂಯೋಗೇ ಪ್ರಾಣಲಿಂಗಂ ತಥಾ ಭವೇತ್” ಎಂದೀ ಮಂತ್ರದಿಂದ ಆತನ ಆತ್ಮನ ಶುದ್ಧವಂ ಮಾಡುವುದು. ಇನ್ನು ವಾಕ್ಕು ಪಾಣಿ ಪಾದ ಗುಹ್ಯ ಪಾಯುವೆಂಬ ಕರ್ಮೇಂದ್ರಿಯಂಗಳ ಮೇಲಣ ಇಂದ್ರಿಯ ಲಿಖಿತವಂ ತೊಡೆದು ಲಿಂಗಲಿಖಿತವಂ ಮಾಡುವ ಕ್ರಮವೆಂತೆಂದಡೆ: “ಓಂ ನೇತ್ರೇ ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ ಕರ್ಣೌ ಪಾತು ಶಂಭುರ್ಮೇ ನಾಸಿಕಾಯಾಂ ಭವೋದ್ಭವಃ ವಾಗೀಶಃ ಪಾತು ಮೇ ಜಿಹ್ವಾಮೋಷ್ಠಂ ಪಾತ್ವಂಬಿಕಾಪತಿಃ” ಎಂದೀ ಮಂತ್ರದಿಂದ ಆತನ ಪಂಚೇಂದ್ರಿಯಂಗಳ ಮೇಲಣ ಇಂದ್ರಿಯ ಲಿಖಿತಮಂ ತೊಡೆದು ಲಿಂಗಲಿಖಿತವಂ ಮಾಡುವುದು. ಇನ್ನು ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳ ನಿವರ್ತನೆಯ ಮಾಡುವ ಕ್ರಮವೆಂತೆಂದಡೆ: ಮನದಲ್ಲಿ ಧ್ಯಾನವಾಗಿ, ಬುದ್ಧಿಯಲ್ಲಿ ವಂಚನೆಯಿಲ್ಲದೆ, ಚಿತ್ತವು ದಾಸೋಹದಲ್ಲಿ, ಅಹಂಕಾರವು ಜ್ಞಾನದಲ್ಲಿ, ಈ ಮರ್ಯಾದೆಯಲ್ಲಿ ಚತುರ್ವಿಧಮಂ ನಿವರ್ತನೆಯಂ ಮಾಡುವುದು. ಇನ್ನು ಆತಂಗೆ ಪಂಚಗವ್ಯಮಂ ಕೊಟ್ಟು ಏಕಭುಕ್ತೋಪವಾಸಂಗಳಂ ಮಾಡಿಸಿ ಪಂಚಭೂತಸ್ಥಾನದ ಅಧಿದೇವತೆಗಳಂ ತೋರುವುದು. ಅವಾವೆಂದಡೆ: “ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಏತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ” ಎಂಬೀ ಮಂತ್ರದಿಂದ ಆತನ ಪಂಚಭೂತ ಶುದ್ಧಿಯಂ ಮಾಡುವುದು. ಈ ಕ್ರಮದಲ್ಲಿ ಶುದ್ಧಾತ್ಮನಂ ಮಾಡಿದ ಬಳಿಕ ಆತನನ್ನು ಗಣತಿಂಥಿಣಿಯ ಮುಂದೆ ನಿಂದಿರಿಸುವುದು. ನಿಂದಿರ್ದಾತನಂ ದಂಡಪ್ರಣಾಮಮಂ ಮಾಡಿಸುವ ಕ್ರಮವೆಂತೆಂದಡೆ: “ಅನಂತ ಜನ್ಮಸಂಪ್ರಾಪ್ತ ಕರ್ಮೇಂಧನವಿದಾಹಿನೇ ಜ್ಞಾನಾನಲಪ್ರಭಾವಾಯ ತಸ್ಮೈ ಶ್ರೀಗುರವೇ ನಮಃ ಕರ್ಮಣಾ ಮನಸಾ ವಾಚಾ ಗುರು ಭಕ್ತೈತುವತ್ಸಲಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಪ್ರಣಮ್ಯ ದಂಡವದ್ಭೂಮೌ ಅಷ್ಟಮಂತ್ರೈಃ ಸಮರ್ಚಯೇತ್ ಶ್ರೀಗುರೋಃ ಪಾದಪದ್ಮಂಚ ಗಂಧಪುಷ್ಪಾಕ್ಷತಾದಿಭಿಃ ಅನ್ಯಥಾ ವಿತ್ತಹೀನೋsಪಿ ಗುರುಭಕ್ತಿಪರಾಯಣಃ ಕೃತ್ವಾ ದಂಡನಮಸ್ಕಾರಂ ಸ್ವಶರೀರಂ ನಿವೇದಯೇತ್” ಎಂದೀ ಮಂತ್ರದಿಂದ ದಂಡಪ್ರಣಾಮವಂ ಮಾಡಿಸುವುದು. ಆತನ ರೈವಿಡಿದೆತ್ತುವ ಕ್ರಮವೆಂತೆಂದರೆ: “ಗುರುಃ ಪಿತಾ ಗುರುರ್ಮಾತಾ ಗುರುರೇವ ಹಿ ಬಾಂಧವಃ ಗುರುದೈವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಓಂ ಗುರುದೇವೋ ಭವ, ಓಂ ಪಿತೃದೇವೋ ಭವ, ಓಂ ಆಚಾರ್ಯದೇವೋ ಭವ” ಎಂದೀ ಮಂತ್ರದಿಂದ ಆತನ ಕೈವಿಡಿದೆತ್ತುವುದು. ಇನ್ನು ಭೂಶುದ್ಧಿಯಂ ಮಾಡುವ ಕ್ರಮವೆಂತೆಂದಡೆ: “ಓಂ ಶಿವಶಿವ ಶಿವಾಜ್ಞಯಾ ವಿಷ್ಣುಪ್ರವರ್ತಮಾನುಸ್ಯ, ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋsಪಿ ವಾ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ಪೃಥ್ವೀ ತ್ವಯಾ ಧೃತಾ ದೇವಿ ದೇವತ್ವಂ ವಿಷ್ಣುನಾ ಧೃತಾ ಪಂಚಾರಾಮಯೋ ದೇವಿ ಪವಿತ್ರಂ ಕುರು ಚಾಸನಮ್ ಸಮ್ಮಾರ್ಜನಂ ಶತಂ ಪುಣ್ಯಂ ಸಹಸ್ರಮನುಲೇಪನಮ್ ರೇಖಾಶತಸಹಸ್ರೇಷು ಅನಂತಂ ಪದ್ಮಮುಚ್ಯತೇ ಬಂಧೋ ಭವಹರಶ್ಚೈವ ಸ್ವಸ್ತಿಕಂ ಶತ್ರುನಾಶನಮ್ ಪದ್ಮಂ ಪುಣ್ಯಂ ಫಲಂ ಚೈವ ಮುದ್ರಾ ತು ಮೋಕ್ಷಸಾಧನಮ್ “ ಎಂದೀ ಮಂತ್ರದಿಂದ ಭೂಶುದ್ಧಿಯ ಮಾಡುವದು. ಇನ್ನು ಆತನ ಚೌಕಮಧ್ಯದಲ್ಲಿ ಕುಳ್ಳಿರಿಸುವ ಕ್ರಮವೆಂತೆಂದಡೆ: “ಓಂ ನಮೋ ರುದ್ರೇಭ್ಯೋ ಯೇ ಪೃಥ್ವಿವ್ಯಾಂ ಯೇsಂತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ ವರ್ಷಮಿಷವಸ್ತೇಭ್ಯೋ ದಶಪ್ರಾಚೀರ್ದಶ ದಕ್ಷಿಣಾ ದಶ ಪ್ರತೀಚೀರ್ದಶೋದೀಚೀರ್ದಶೋಧ್ರ್ವಾಸ್ತೇಭ್ಯೋ ನಮಸ್ತೇನೋ ಮೃಡಯಂತು ತೇ ಯಂ ದ್ವಿಷ್ಟೋ ಯಶ್ಚನೋ ದ್ವೇಷ್ಟಿ ತಂ ವೊ ಜಂಬೇ ದಧಾಮಿ ಚಾಂ ಪೃಥಿವ್ಯಾ ಮೇರು ಪೃಷ್ಠ ಋಷಿಃ ಕೂರ್ಮೋ ದೇವತಾ ಜಗತೀ ಛಂದಃ ಆಸನೇ ವಿನಿಯೋಗಃ” ಎಂದೀ ಮಂತ್ರದಿಂದ ಶ್ರೀಗುರು ಆತನ ಚೌಕಮಧ್ಯದಲ್ಲಿ ಕುಳ್ಳಿರಿಸುವುದು. ಇನ್ನು ನಾಲ್ಕೂ ಕಲಶದ ಪ್ರತ್ಯೇಕ ಪ್ರಧಾನ ದೇವತೆಗಳಂ ಕುಳ್ಳಿರಿಸಿ ಗುರುಕಲಶವಂ ಸ್ಥಾಪ್ಯವಂ ಮಾಡುವ ಕ್ರಮವೆಂತೆಂದಡೆ: “ಚೌಕಮಧ್ಯೇ ಸುಮಾಂಗಲ್ಯಂ ಷೋಡಶಂ ಕಲಶಂ ತಥಾ ಭಾಸುರಂ ತಂಡುಲಂ ತಸ್ಯ ಪಂಚಸೂತ್ರಂ ತಥೈವ ಚ ತೇಷು ತೀರ್ಥಾಂಬುಪೂರ್ಣೇಷು ನಿದಧ್ಯಾದಾಮ್ರಪಲ್ಲವಾನ್ ದೂರ್ವಾಂಕುರಸುಪೂಗಾನಿ ನಾಗವಲ್ಲೀದಲಾನ್ಯಪಿ ಓಂ ತತ್ಪುರುಷಾಯ ನಮಃ ತತ್ಪುರುಷವಕ್ತ್ರಾಯ ನಮಃ ಓಂ ಅಘೋರರಾಯ ನಮಃ ಅಘೋರವಕ್ತ್ರಾಯ ನಮಃ ಓಂ ಸದ್ಯೋಜಾತಾಯ ನಮಃ ಸದ್ಯೋಜಾತವಕ್ತ್ರಾಯ ನಮಃ ಓಂ ವಾಮದೇವಾಯ ನಮಃ ವಾಮದೇವವಕ್ತ್ರಾಯ ನಮಃ ಓಂ ಈಶಾನಾಯ ನಮಃ ಈಶಾನವಕ್ತ್ರಾಯ ನಮಃ ಓಂ ತತ್ಪುರುಷ ಅಘೋರ ಸದ್ಯೋಜಾತ ವಾಮದೇವ ಈಶಾನ ವಕ್ತ್ರೇಭ್ಯೋ ನಮಃ” ಎಂದು ಈ ಮಂತ್ರದಿಂದ ಗುರುಕಲಶಕ್ಕೆ ಪಂಚಸೂತ್ರಂಗಳನಿಕ್ಕಿ, ಪಂಚಪಲ್ಲವಂಗಳನಿಕ್ಕಿ ಪಂಚಮುಖಂಗಳನಿಕ್ಕಿ ಗುರುಕಲಶವಂ ಸ್ಥಾಪ್ಯವಂ ಮಾಡುವುದು. ಇನ್ನು ಜಲಶುದ್ಧವಂ ಮಾಡುವ ಕ್ರಮವೆಂತೆಂದಡೆ: “ಓಂ ನಮಃ ಶಿವಾಯ ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಲಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ಮಹಾದೇವಾಯ ನಮಃ ಓಂ ನಿಧನಪತಯೇ ನಮಃ ನಿಧನಪತಾಂತಿಕಾಯ ನಮಃ ಓಂ ಊರ್ಧ್ವಾಯ ನಮಃ ಊರ್ಧ್ವಲಿಂಗಾಯ ನಮಃ ಓಂ ಹಿರಣ್ಯಾಯ ನಮಃ ಹಿರಣ್ಯಲಿಂಗಾಯ ನಮಃ ಓಂ ಸುವರ್ಣಾಯ ನಮಃ ಸುವರ್ಣಲಿಂಗಾಯ ನಮಃ ಓಂ ದಿವ್ಯಾಯ ನಮಃ ದಿವ್ಯಲಿಂಗಾಯ ನಮಃ ಓಂ ಭವಾಯ ನಮಃ ಭವಲಿಂಗಾಯ ನಮಃ ಓಂ ಶಿವಾಯ ನಮಃ ಶಿವಲಿಂಗಾಯ ನಮಃ ಓಂ ಜ್ಯೇಷ್ಠಾಯ ನಮಃ ಜ್ಯೇಷ್ಠಲಿಂಗಾಯ ನಮಃ ಓಂ ಶ್ರೇಷ್ಠಾಯ ನಮಃ ಶ್ರೇಷ್ಠಲಿಂಗಾಯ ನಮಃ ಓಂ ಜ್ವಲಾಯ ನಮಃ ಜ್ವಲಲಿಂಗಾಯ ನಮಃ ಓಂ ಸ್ಥೂಲಾಯ ನಮಃ ಸ್ಥೂಲಲಿಂಗಾಯ ನಮಃ ಓಂ ಸೂಕ್ಷ್ಮಾಯ ನಮಃ ಸೂಕ್ಷ್ಮಲಿಂಗಾಯ ನಮಃ ಓಂ ಶೂನ್ಯಾಯ ನಮಃ ಶೂನ್ಯಲಿಂಗಾಯ ನಮಃ ಓಂ ನೇತ್ರಾಯ ನಮಃ ನೇತ್ರಲಿಂಗಾಯ ನಮಃ ಓಂ ಶ್ರೋತ್ರಾಯ ನಮಃ ಶ್ರೋತ್ರಲಿಂಗಾಯ ನಮಃ ಓಂ ಘ್ರಾಣಾಯ ನಮಃ ಘ್ರಾಣಲಿಂಗಾಯ ನಮಃ ಓಂ ಪ್ರಾಣಾಯ ನಮಃ ಪ್ರಾಣಲಿಂಗಾಯ ನಮಃ ಓಂ ವ್ಯೋಮಾಯ ನಮಃ ವ್ಯೋಮಲಿಂಗಾಯ ನಮಃ ಓಂ ಆತ್ಮಾಯ ನಮಃ ಆತ್ಮಲಿಂಗಾಯ ನಮಃ ಓಂ ಪರಮಾಯ ನಮಃ ಪರಮಲಿಂಗಾಯ ನಮಃ ಓಂ ಶರ್ವಾಯ ನಮಃ ಶರ್ವಲಿಂಗಾಯ ನಮಃ ಓಂ ಶಾಂತಾಯ ನಮಃ ಶಾಂತಲಿಂಗಾಯ ನಮಃ ಓಮೇತತ್ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ ಸ್ಥಾಪಯತಿ ಪಾಣಿಮಂತ್ರಂ ಪವಿತ್ರಮ್ ಓಂ ನಮಸ್ತೇ ಸರ್ವೋ ವೈ ರುದ್ರಸ್ತಸ್ಮೈ ರುದ್ರಾಯ ನಮೋsಸ್ತು ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ ಪಶುಪತಯೇ ನಮೋ ನಮಃ ಋತಂ ಸತ್ಯಂ ಪರಬ್ರಹ್ಮ ಪುರುಷಂ ಕೃಷ್ಣಪಿಂಗಲಂ ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ ಭವೇ ಭವೇ ನಾತಿಭವೇ ಭವಸ್ವ ಮಾಂ ಭವೋದ್ಭವಾಯ ನಮಃ ಓಂ ವಾಮದೇವಾಯ ನಮೋ ಜ್ಯೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಾಯ ನಮೋ ಬಲಾಯ ನಮೋ ಬಲಪ್ರಮಥನಾಥಾಯ ನಮಃ ಸರ್ವಭೂತದಮನಾಯ ನಮೋ ಮನೋನ್ಮನಾಯ ನಮಃ ಓಂ ಅಘೋರೇಭ್ಯೋsಥ ಘೋರೇಭ್ಯೋ ಘೋರಘೋರತರೇಭ್ಯ