ಭವಿತನವ ಕಳೆದು ಭಕ್ತನಾದ ಬಳಿಕ
ಮತ್ತೆ ಭಕ್ತಿಯ ಹೊಲಬ ಹೊದ್ದಲೊಲ್ಲದೆ,
ಆಚಾರವನತಿಗಳೆದು ಅನ್ಯದೈವವ ಭಜಿಸಿ,
ಅವರೆಂಜಲ ಭುಂಜಿಸಿ
ನರಕಕ್ಕಿಳಿವ ಪಾತಕರು ತಾವು ಕೆಟ್ಟುದಲ್ಲದೆ,
ಇತ್ತ ಮತ್ತೆ ಎತ್ತಲಾನೊಬ್ಬನು ಸತ್ಯಸದಾಚಾರವಿಡಿದು,
ಗುರುಲಿಂಗಜಂಗಮವನಾರಾಧಿಸಿ ಪ್ರಸಾದವ ಕೊಂಡು,
ಬದುಕುವೆನೆಂಬ ಭಕ್ತಿಯುಕ್ತನ ಅಂದಂದಿಗೆ ಜರೆದು,
ನಿಮ್ಮ ತಂದೆತಾಯಿಗಳಿಗೆ ಬಳಿವಿಡಿದು ಬಂದ
ಕುಲದೈವ ಮನೆದೈವವ ಬಿಟ್ಟು,
ಈ ಲಿಂಗಜಂಗಮದ ಪ್ರಸಾದ ಭಕ್ತಿಯುಕ್ತಿಗಳಲ್ಲಿ
ಏನುಂಟೆಂದು ಕೆಡೆನುಡಿದು ಬಿಡಿಸಿ,
ಆ ಅನ್ಯದೈವಂಗಳ ಹಿಡಿಸಿ,
ತಾ ಕೆಡುವ ಅಘೋರನರಕದೊಳಗೆ ಅವರನೂ
ಒಡಗೂಡಿಕೊಂಡು ಮುಳುಗೇನೆಂಬ ಕಡುಸ್ವಾಮಿದ್ರೋಹಿ
ನಾಯ ಹಿಡಿದು, ಮೂಗ ಕೊಯಿದು
ನಡೆಸಿ ಕೆಡಹುವ ನಾಯಕನರಕದಲ್ಲಿ
ಎನ್ನೊಡೆಯ ಕೂಡಲಚೆನ್ನಸಂಗಯ್ಯ.
Art
Manuscript
Music
Courtesy:
Transliteration
Bhavitanava kaḷedu bhaktanāda baḷika
matte bhaktiya holaba hoddalollade,
ācāravanatigaḷedu an'yadaivava bhajisi,
avaren̄jala bhun̄jisi
narakakkiḷiva pātakaru tāvu keṭṭudallade,
itta matte ettalānobbanu satyasadācāraviḍidu,
guruliṅgajaṅgamavanārādhisi prasādava koṇḍu,
badukuvenemba bhaktiyuktana andandige jaredu,
nim'ma tandetāyigaḷige baḷiviḍidu banda
kuladaiva manedaivava biṭṭu,
ī liṅgajaṅgamada prasāda bhaktiyuktigaḷalli
ēnuṇṭendu keḍenuḍidu biḍisi,
ā an'yadaivaṅgaḷa hiḍisi,
Tā keḍuva aghōranarakadoḷage avaranū
oḍagūḍikoṇḍu muḷugēnemba kaḍusvāmidrōhi
nāya hiḍidu, mūga koyidu
naḍesi keḍahuva nāyakanarakadalli
ennoḍeya kūḍalacennasaṅgayya.