ಭವಿಯ ಮನೆಯಲ್ಲಿ ಭವಿಪಾಕವಲ್ಲದೆ
ಭಕ್ತನ ಮನೆಯಲ್ಲಿ ಭವಿಪಾಕವಿಲ್ಲ.
ಆ ಭಕ್ತನೂ ಆ ಭಕ್ತನ ಸ್ತ್ರೀಯೂ ಲಿಂಗ ಮುಂತಾಗಿ
ಗುರುಲಿಂಗ ಜಂಗಮಕ್ಕೆ ಬೇಕೆಂದು
ಭಕ್ತಿರತಿಯಿಂದ ಲಿಂಗಹಸ್ತದಲ್ಲಿ ಮಾಡಿದ
ಸರ್ವದ್ರವ್ಯಂಗಳು ಸಕಲಪದಾರ್ಥಂಗಳೆಲ್ಲವೂ
ಶುದ್ಧಪಾಕ, ಅತ್ಯಂತ ಪವಿತ್ರಪಾಕ, ಲಿಂಗಕ್ಕೆ ಸಲುವುದು.
ಅದನತಿಗಳೆದಡೆ ದ್ರೋಹ, ಲಿಂಗಕ್ಕೆ ಕೊಟ್ಟುಕೊಳಬೇಕು,
ಕೂಡಲಚೆನ್ನಸಂಗಮದೇವಾ.