ಭಿನ್ನದೈವವುಳ್ಳ ಭಕ್ತನ ಮನೆಯ
ಆರೋಗಣೆ ಅನ್ಯಾಹಾರವಯ್ಯಾ.
ನಂಬಿಗೆಯಿಲ್ಲದ ಭಕ್ತನ ಮನೆಯ
ಆರೋಗಣೆ ಸಂದೇಹದ ಕೂಳು.
ಕೊಟ್ಟು ಕೊಂಡು ನೀಡಿ ಮಾಡಿ, ಹಮ್ಮು ನುಡಿವ
ಭಕ್ತನ ಮನೆಯ ಆರೋಗಣೆ ಕಾರಿದ ಕೂಳು.
ನಿಮ್ಮ ನಂಬಿದ ಸದ್ಭಕ್ತರ ಮನೆಯ ಆರೋಗಣೆ
ಲಿಂಗಾರ್ಪಿತವಯ್ಯಾ.
ಅದೆಂತೆಂದಡೆ:
ಸದಾಚಾರ ಶಿವಾಚಾರ ಲಿಂಗಾಚಾರ ಗಣಾಚಾರ
ಭೃತ್ಯಾಚಾರ ಸತ್ಕಾಯಕದಿಂದ ಬಂದುದಾಗಿ
ಭಕ್ತಿಪದಾರ್ಥವಯ್ಯಾ, ಕೂಡಲಚೆನ್ನಸಂಗಮದೇವಾ.