Index   ವಚನ - 1484    Search  
 
ಮಂಡೆಯ ಬೋಳಿಸಿಕೊಂಡು ಜಂಗಮವಾದೆವೆಂಬ ಅಣ್ಣಗಳು ನೀವು ಕೇಳಿರೇ! ಹಿಂದೆ ಮುಂದೆ ಬೋಳಿಸಿದರೆ, ಇಹಲೋಕ ಪರಲೋಕ ನಾಸ್ತಿಯಾಗಬೇಕು. ಕೆಲಬಲನ ಬೋಳಿಸಿದರೆ, ಪುಣ್ಯಪಾಪಂಗಳರತು ಹೋಗಬೇಕು. ಈ ಮರ್ಮವನರಿಯದೆ ಬೋಳಾದರೆ ಅವರು ಕೂಡಲಚೆನ್ನಸಂಗಯ್ಯನಲ್ಲಿ ಕುರುಹಿಂಗೆ ಪಾತ್ರರಲ್ಲದೆ ಲಿಂಗಕ್ಕೆ ಪಾತ್ರರಲ್ಲ ಕಾಣಾ.