Index   ವಚನ - 1486    Search  
 
ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆ, ನಾದವೆ ಕಿರೀಟ, `ಅ'ಕಾರ `ಉ'ಕಾರವೆ ಬಿಂದುವಕ್ತ್ರ, ಪರಶಿವಸ್ವರೂಪವಾದ `ಹ್ರ'ಕಾರವೆ ದೇಹ, `ಹ್ರೀಂ'ಕಾರವೆ ಶಕ್ತಿ, ಹಂಸದ್ವಯಾ ಶೃಂಗವೇ ಭುಜ, `ವ'ಕಾರವೆ ಕಳಾ ಸ್ವರೂಪವಾದವನಿಯೆ ಪಾದದ್ವಯ. ಇಂತೀ ಮಂತ್ರಮೂರ್ತಿಯಾದ ಪರಶಿವನು, ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೊಡುವ ದೇವ ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ.