Index   ವಚನ - 1487    Search  
 
ಮತಿಗೆಟ್ಟ ಕುಂಬರ ಮಣ್ಣ ಸೂಚಿಯ ಮಾಡಿ ಕುಂಬಾರಗೇರಿಗೆ ಮಾರಹೋದಡೆ, ಅವರುಕ್ಕಿನ ಸೂಜಿಯ ಮಾರುವರಾಗಿ! ವೇಷಧಾರಿ ಮಾತ ಕಲಿತು ಅಭಿಮಾನಕ್ಕೆ ಪರೀಕ್ಷೆಯ ಕೊಡುವಂತೆ ಕೂಡಲಚೆನ್ನಸಂಗನ ನಿಲವನರಿಯದೆ ಉಲಿಯದಿರಾ ಲೀಲೆಯ ಪಶುವೆ.