Index   ವಚನ - 1490    Search  
 
ಮಧುರಗುಣವ ಇರುವೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು. ಈ ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಜ್ಞಾನಿಗಳ ಬರವನರಯದಿದ್ದಡೆ ಆ ಕೋಳಿ ಕಾಗೆ ಇರುವೆಗಿಂತಲು ಕರಕಷ್ಟ ಕಾಣಾ, ಕೂಡಲಚೆನ್ನಸಂಗಮದೇವಾ.