Index   ವಚನ - 1492    Search  
 
ಮನಕ್ಕೆ ಮನವೇಕಾರ್ಥವಾಗಿ, ಪ್ರಾಣಕ್ಕೆ ಪ್ರಾಣವೇಕಾರ್ಥವಾಗಿ, ಭಾವಕ್ಕೆ ಭಾವವೇಕಾರ್ಥವಾಗಿ, ಸಂಗಕ್ಕೆ ಸಂಗ ಸಮರತಿಯಾಗಿ, ಕೂಡಿದ ಕೂಟವನಗಲಬಾರದಯ್ಯ; ಅಗಲಿ ಒಂದು ನಿಮಿಷ ಸೈರಿಸಬಾರದಯ್ಯಾ. ಕೂಡಲಚೆನ್ನಸಂಗಾ, ನಿಮ್ಮ ನಚ್ಚುಮೆಚ್ಚಿನ ಶರಣರನಗಲುವ ಅಗಲಿಕೆ ಎನ್ನ ಪ್ರಾಣದ ಹೋಕು ನೋಡಯ್ಯಾ.