Index   ವಚನ - 1495    Search  
 
ಮನ ಭಾವ ಕರಣಂಗಳೊಳಹೊರಗೆ ತೆರಹಿಲ್ಲದ ದೇವಾ, ಬಂದ ಪದಾರ್ಥವನವಧರಿಸು ದೇವಾ, ಭಾವಭರಿತದೇವಾ. ಅದೆಂತೆಂದಡೆ: "ತಿಲಮಧ್ಯೇ ಯಥಾ ತೈಲಂ ಕ್ಷೀರಮಧ್ಯೇ ಯಥಾ ಘೃತಂ ಪುಷ್ಪಮಧ್ಯೇ ಯಥಾ ಗಂಧೋ ಭಾವಮಧ್ಯೇ ತಥಾ ಶಿವಃ" ಎಂದುದಾಗಿ ಎಲ್ಲ ಭೋಗಂಗಳು ತನ್ನವಾಗಿ, ಎಲ್ಲ ಕರಣಂಗಳ ತನ್ಮಯ ಮಾಡಿಕೊಂಡನಾಗಿ ಕೂಡಲಚೆನ್ನಸಂಗದೇವರು.