ಮರ್ತ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು,
ದೇವಾ, ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ.
ಸತ್ಯ ಶರಣರೆಲ್ಲರನು ಪಾವನವ ಮಾಡಲೆಂದು ಬಂದಡೆ,
[ನರ]ಜನ್ಮದಲ್ಲಿ ಬಂದನೆಂದೆನಬಹುದೆ?
ಕರ್ತನ ನಿರೂಪು ಭೃತ್ಯಂಗೆ ಬಂದಲ್ಲಿ,
ಆ ಭೃತ್ಯ ಕರ್ತನನರಸಿ ಬಂದನಲ್ಲಾ!
ಸತ್ಯ ಸದಾಚಾರವ ಹರಡಿ,
ಮರ್ತ್ಯರ ಪಾವನವ ಮಾಡಿ
ನಿಜಲಿಂಗ ಸಮಾಧಿಯೊಳು,
ನಿಲ್ಲುವರಿನ್ನಾರು ಹೇಳಾ, ನೀವಲ್ಲದೆ?
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ನಿಮಗೆ ಭವವುಂಟೆಂದು ಮನದಲ್ಲಿ ಹಿಡಿದಡೆ,
ಸಂಗನಬಸವಣ್ಣಾ ನಿಮ್ಮ ಶ್ರೀಪಾದದಾಣೆ.
Art
Manuscript
Music
Courtesy:
Transliteration
Martyalōka śivalōkavembuvu niccaṇikeyādavu,
dēvā, nīvī kalyāṇakke bandavatarisidalli.
Satya śaraṇarellaranu pāvanava māḍalendu bandaḍe,
[nara]janmadalli bandanendenabahude?
Kartana nirūpu bhr̥tyaṅge bandalli,
ā bhr̥tya kartananarasi bandanallā!
Satya sadācārava haraḍi,
martyara pāvanava māḍi
nijaliṅga samādhiyoḷu,
nilluvarinnāru hēḷā, nīvallade?
Kūḍalacennasaṅgamadēvaru sākṣiyāgi
nimage bhavavuṇṭendu manadalli hiḍidaḍe,
saṅganabasavaṇṇā nim'ma śrīpādadāṇe.